Namma Metro (ನಮ್ಮ ಮೆಟ್ರೋ) ಹಳದಿ ಮಾರ್ಗದ ಪ್ರಯಾಣಿಕರಿಗೆ ಒಳ್ಳೆಯ ಸುದ್ದಿ: ಚಾಲಕರಹಿತ 7ನೇ ರೈಲು ಬೆಂಗಳೂರಿಗೆ ತಲುಪಿದೆ.

ಹೆಲೋ ಗೆಳೆಯರೇ ಇಂದು ನಾನು ನಿಮಗೆ ನಮ್ಮ ಮೆಟ್ರೋ ಚಾಲಕರ ಹಿತ ಏಳನೇ ರೈಲು ಬೆಂಗಳೂರಿಗೆ ಬಂದಿದೆ. ಇದು ಹಳದಿ ಮಾರ್ಗದ ಪ್ರಯಾಣಿಕರಿಗೆ ಸಂತಸ ತಂದಿದೆ. ಇಂದು ನಾನು ಈ ಲೇಖನದಲ್ಲಿ ನಮ್ಮ ಮೆಟ್ರೋದ ರೈಲಿನ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ.

ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಜಂಟಿ ಉದ್ಯಮವಾಗಿದ್ದು, ಬೆಂಗಳೂರು ಮೆಟ್ರೋ ರೈಲು ಯೋಜನೆಯ ಅನುಷ್ಠಾನ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಲಾದ ವಿಶೇಷ ಉದ್ದೇಶದ ವಾಹಕವಾಗಿದೆ.

ಬೆಂಗಳೂರು ಮೆಟ್ರೋಗೆ “ನಮ್ಮ ಮೆಟ್ರೋ’’ ಎಂದು ನಾಮಕರಣ ಮಾಡಿದ್ದು, ಇದು ಬೆಂಗಳೂರಿನ ಕ್ಷಿತಿಜದ ಸೌಂದರ್ಯಕ್ಕೆ ಪೂರಕವಾಗಿರುವುದು ಮಾತ್ರವಲ್ಲದೆ, ಸುಖಕರ ಪ್ರಯಾಣಕ್ಕೆ ಸಹ ಪೂರಕವಾದದ್ದಾಗಿದೆ. ಇದರ ಜೊತೆಗೆ, ನಮ್ಮ ಮೆಟ್ರೋ ಇಂಗಾಲ ಹೊರಸೊಸುವಿಕೆಯ ತಗ್ಗುವಿಕೆಗೆ ಗಣನೀಯ ಕೊಡುಗೆ ನೀಡುತ್ತಿರುವುದರಿಂದ ಇದು ಬೆಂಗಳೂರು ನಗರಕ್ಕೆ ಒಂದು ಮುಖ್ಯ ಪರಿಸರ ಸ್ನೇಹಿ ಸೇರ್ಪಡೆಯೆನಿಸಿದೆ.

Namma Metro Yellow Line
Namma Metro Yellow Line

ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ 7 ನೇ ಚಾಲಕರಹಿತ ರೈಲು ಬೆಂಗಳೂರನ್ನು ತಲುಪಿದೆ. ಇದು ಜನವರಿಯಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಮತ್ತು ರೈಲುಗಳ ನಡುವಿನ ಪ್ರಯಾಣದ ಸಮಯವನ್ನು 8-10 ನಿಮಿಷಗಳಿಗೆ ಇಳಿಸುತ್ತದೆ. ಆರ್.ವಿ. ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುವ ಈ ಮಾರ್ಗವು ಪ್ರಯಾಣಿಕರಿಗೆ ವೇಗವಾದ ಸೇವೆಯನ್ನು ಒದಗಿಸುತ್ತದೆ. ಪಿಂಕ್ ಲೈನ್ ಮೆಟ್ರೋ ಮೇ 2026 ರಲ್ಲಿ ಚಾಲಕರಹಿತ ರೈಲುಗಳೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗ

Namma Metro
Namma Metro

ಬೆಂಗಳೂರು, ಡಿಸೆಂಬರ್ 19: ನಮ್ಮ ಮೆಟ್ರೋದ Yellow ಮಾರ್ಗದ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ ಡ್ರೈವರ್ಲೆಸ್ 7ನೇ ರೈಲು ಬೆಂಗಳೂರು ತಲುಪಿದ್ದು, ಈ ಮಾರ್ಗದಲ್ಲಿ ರೈಲುಗಳ ನಡುವಿನ ಓಡಾಟದ ಸಮಯ ಹೊಸ ವರ್ಷಕ್ಕೆ ಮತ್ತಷ್ಟು ಕಡಿಮೆ ಆಗಲಿದೆ. ಹೊಸ ರೈಲು ಹಳಿಗಿಳಿದ ಬೆನ್ನಲ್ಲೇ 8-10 ನಿಮಿಷಗಳಿಗೆ ಒಂದರಂತೆ ಮೆಟ್ರೋ ಸಂಚರಿಸಲಿದೆ ಇದು ಪ್ರಯಾಣವನ್ನು ಇನ್ನಷ್ಟು ವೇಗವಾಗಿಸುತ್ತದೆ ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತದೆ.

ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು

ಡಿಸೆಂಬರ್ 10ರಂದು ಕೊಲ್ಕತ್ತಾದ ಟಿಟಾಗರ್ನಿಂದ ಹೊರಟಿದ್ದ ಡ್ರೈವರ್ಲೆಸ್ 7ನೇ ರೈಲು ಇಂದು ಸಂಜೆ ಬೆಂಗಳೂರಿನ ಹೆಬ್ಬಗೋಡಿ ಡಿಪೋ ತಲುಪಿದೆ. ಇದು ಜನವರಿಯಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಿದ್ದು, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಯೆಲ್ಲೋ ಲೈನ್ನಲ್ಲಿ ಓಡಾಡಲಿದೆ. ಸರಿಸುಮಾರು 19.15 ಕಿಮೀ ವಿಸ್ತೀರ್ಣವಿರುವ ಈ ಮಾರ್ಗದಲ್ಲಿ ಸದ್ಯ 5 ಮೆಟ್ರೋ ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ. ಆಗಸ್ಟ್ 10ರಂದು ಯೆಲ್ಲೋ ಲೈನ್ ಉದ್ಘಾಟನೆಯಾಗಿದ್ದು, ಆಗಸ್ಟ್ 11ರಿಂದ ವಾಣಿಜ್ಯ ಸಂಚಾರವನ್ನು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಆರಂಭಿಸಿತ್ತು.

ಮೇನಿಂದ ಪಿಂಕ್ ಲೈನ್ ಮೆಟ್ರೋ ಸಂಚಾರ ಸಾಧ್ಯತೆ ಹೆಚ್ಚಾಗಿದೆ.

ನಮ್ಮ ಮೆಟ್ರೋದ ಬಹು ನಿರೀಕ್ಷಿತ ಉತ್ತಮ ಯೋಜನೆಗಳಲ್ಲೊಂದಾದ ಪಿಂಕ್ ಲೈನ್ನಲ್ಲಿ ಸಂಚಾರ ಮಾಡಲಿರುವ ಚಾಲಕ ರಹಿತ ರೈಲಿನ ಮಾದರಿಯನ್ನು ಬಿಇಎಂಎಲ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಒಟ್ಟು 23 ಚಾಲಕರಹಿತ ರೈಲುಗಳಿಗೆ ಆರ್ಡರ್ ನೀಡಲಾಗಿದ್ದು, 2026 ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು BMRCL ಸಿದ್ಧತೆ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ಬ್ಲ್ಯೂ ಲೈನ್ ಮತ್ತು ಪಿಂಕ್ ಲೈನ್ ಮೆಟ್ರೋಗಳಿಗಾಗಿ ಒಟ್ಟು 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಬೋಗಿಗಳನ್ನು BEML ಪೂರೈಸಲಿದೆ. ಮೆಟ್ರೋ ಟ್ರೇನ್‌ಸೆಟ್‌ಗಳನ್ನು ಸಂಪೂರ್ಣವಾಗಿ ಬೆಂಗಳೂರಿನ BEMLನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇಂಜಿನಿಯರಿಂಗ್ ಮತ್ತು ನಿರ್ಮಾಣ ಎಲ್ಲವೂ ಇಲ್ಲಿಯೇ ಆಗಿದೆ. ಇದು ಬೆಂಗಳೂರು ಮಹಾಜನತೆಗೆ ಉತ್ತಮವಾದ ಪ್ರಯಾಣದ ಅನುಭವವನ್ನು ನೀಡುತ್ತದೆ.

Leave a Comment